ಲಂಡನ್: ನಿನ್ನೆ ನಡೆದ ವಿಶ್ವಕಪ್ ಸೆಮಿಫೈನಲ್ 2 ರಲ್ಲಿ ಆಸ್ಟ್ರೇಲಿಯಾವನ್ನು ಅತಿಥೇಯ ಇಂಗ್ಲೆಂಡ್ 8 ವಿಕೆಟ್ ಗಳಿಂದ ಭರ್ಜರಿಯಾಗಿ ಸೋಲಿಸಿ ಫೈನಲ್ ಗೇರಿದೆ.ಆ ಮೂಲಕ ಈ ಬಾರಿ ವಿಶ್ವಕಪ್ ಫೈನಲ್ ನಲ್ಲಿ ನ್ಯೂಜಿಲೆಂಡ್-ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಇದರಲ್ಲಿ ಯಾವುದೇ ತಂಡ ಪ್ರಶಸ್ತಿ ಗೆದ್ದರೂ ಮೊದಲ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಲಿವೆ. ನಿನ್ನೆ ನಡೆದ ಸೆಮಿಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ 49 ಓವರ್ ಗಳಲ್ಲಿ 223 ಕ್ಕೆ ಆಲೌಟ್ ಆಯಿತು.