ವಿಶ್ವಕಪ್ ಕ್ರಿಕೆಟ್ 2019: ಅಭಿಮಾನಿಗಳ ತಾಳ್ಮೆ ಮಿತಿ ಮೀರಿ ಹೋಯ್ತು!

ಲಂಡನ್, ಶುಕ್ರವಾರ, 14 ಜೂನ್ 2019 (09:05 IST)

ಲಂಡನ್: ಈ ಬಾರಿ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಕ್ರಿಕೆಟಿಗರ ಆಟಕ್ಕಿಂತ ಮಳೆಯ ಕಾಟ ನೋಡುವುದರಲ್ಲೇ ಪ್ರೇಕ್ಷಕರು ಸುಸ್ತಾಗಿ ಹೋಗಿದ್ದಾರೆ. ಮಳೆಯಿಂದಾಗಿ ಆಟ ರದ್ದಾದ ಸುದ್ದಿ ನೋಡಿ ನೋಡಿ ಪ್ರೇಕ್ಷಕರ ತಾಳ್ಮೆ ಮಿತಿ ಮೀರಿದೆ.
 


ಇಂತಹಾ ಸಮಯದಲ್ಲಿ ಇಂಗ್ಲೆಂಡ್ ನಲ್ಲಿ ಟೂರ್ನಿ ನಡೆಸುವ ಅಗತ್ಯವಿತ್ತಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ. ಟ್ವಿಟರ್, ಫೇಸ್ ಬುಕ್ ಮುಖಾಂತರ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.
 
ಪದೇ ಪದೇ ಮಳೆಯಿಂದಾಗಿ ಪಂದ್ಯ ರದ್ದು ಎನ್ನುವ ಸುದ್ದಿ ನೋಡಿ ನೋಡಿ ಪ್ರೇಕ್ಷಕರ ತಾಳ್ಮೆ ಕೆಟ್ಟು ಹೋಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇದನ್ನೇ ಜೋಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ವಿಶ್ವಕಪ್ ಕ್ರಿಕೆಟ್ ಕೂಟವನ್ನು ಇಷ್ಟು ತಡವಾಗಿ ಅಂದರೆ ಮಳೆಗಾಲದಲ್ಲಿ ಅದೂ ಇಂಗ್ಲೆಂಡ್ ನಲ್ಲಿ ಆಯೋಜಿಸಿದ್ದಕ್ಕೆ ಐಸಿಸಿಗೆ ಹಿಡಿಶಾಪ ಹಾಕುತ್ತಿದ್ದಾರೆ.
 
ಹೀಗಾಗಿ ರೋಚಕತೆ ಪಡೆದುಕೊಳ್ಳಬೇಕಿದ್ದ ವಿಶ್ವಕಪ್ ಕೂಟದ ಬಗ್ಗೆ ಈಗ ಆಕ್ರೋಶ ಮನೆ ಮಾಡಿದೆ. ಅಷ್ಟೇ ಅಲ್ಲ, ಮಳೆಯಿಂದಾಗಿ ಹಲವು ತಂಡಗಳು ವಿನಾಕಾರಣ ಅಂಕ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಅಲ್ಲದೆ, ಕೆಲವು ತಂಡಗಳಿಗೆ ಮುಂದಿನ ಹಂತಕ್ಕೆ ತೇರ್ಗಡೆಯಾಗುವ ಅವಕಾಶವೇ ವ್ಯರ್ಥವಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ ಕ್ರಿಕೆಟ್ 2019: ಟೀಂ ಇಂಡಿಯಾಕ್ಕೆ ಪಾಕ್ ನಾಯಕನ ಎಚ್ಚರಿಕೆ

ಲಂಡನ್: ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಇದೀಗ ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾಗಿರುವವ ಪಾಕಿಸ್ತಾನ ...

news

ವಿಶ್ವಕಪ್ 2019: ತಂಡಗಳಿಗಿಂತ ಅಂಕಪಟ್ಟಿಯಲ್ಲಿ ಮಳೆ ಗಳಿಸಿದ ಅಂಕವೇ ಹೆಚ್ಚು!

ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ನಿನ್ನೆ ಭಾರತ-ನ್ಯೂಜಿಲೆಂಡ್ ಪಂದ್ಯವೂ ಮಳೆಗೆ ...

news

ವಿಶ್ವಕಪ್ ಕ್ರಿಕೆಟ್ 2019: ಟೀಂ ಇಂಡಿಯಾ-ಕೀವೀಸ್ ಪಂದ್ಯಕ್ಕೆ ಅನಪೇಕ್ಷಿತ ಅತಿಥಿ ಆಗಮನ!

ಲಂಡನ್: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಡೆಯಬೇಕಿದ್ದ ವಿಶ್ವಕಪ್ ಪಂದ್ಯಕ್ಕೆ ವರುಣನ ಆಗಮನವಾಗಿದೆ. ...

news

ಪಾಕಿಸ್ತಾನ ಟಿವಿ ಜಾಹೀರಾತಿಗೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಿಡಿ

ಹೈದರಾಬಾದ್: ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಪತ್ನಿಯೂ ಆಗಿರುವ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ...