ಲಂಡನ್: ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಇದೀಗ ಮತ್ತೊಂದು ಮಹತ್ವದ ಪಂದ್ಯಕ್ಕೆ ಸಜ್ಜಾಗಿರುವವ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಮತ್ತೆ ಹಳಿಗೆ ತರುವ ಜವಾಬ್ಧಾರಿ ನಾಯಕ ಸರ್ಫರಾಜ್ ಅಹಮ್ಮದ್ ಹೆಗಲಿಗೇರಿದೆ. ಭಾನುವಾರ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಪಂದ್ಯವಿದೆ. ಬಲಿಷ್ಠ ತಂಡವಾಗಿರುವ ಭಾರತದ ಎದುರು ಸೋತರೆ ತಮ್ಮ ದೇಶದಲ್ಲಿ ಮರ್ಯಾದೆ ಇಲ್ಲದಂತಾಗುತ್ತದೆ. ಹೀಗಾಗಿ ತಂಡದ ಹುಳುಕುಗಳನ್ನು ಸರಿಪಡಿಸಿ ತಮ್ಮೆಲ್ಲಾ ಶಕ್ತಿಮೀರಿ ಆಡುವುದಾಗಿ ಸರ್ಫರಾಜ್ ಹೇಳಿಕೊಂಡಿದ್ದಾರೆ.ಭಾರತ, ಆಸ್ಟ್ರೇಲಿಯಾದಂತಹ ದೊಡ್ಡ ತಂಡಗಳ ಎದುರು