Widgets Magazine

ವಿಶ್ವಕಪ್ 2019: ಟೀಂ ಇಂಡಿಯಾಕ್ಕೆ ದ.ಆಫ್ರಿಕಾದಿಂದ ಗುಡ್ ನ್ಯೂಸ್!

ಲಂಡನ್| Krishnaveni K| Last Modified ಮಂಗಳವಾರ, 4 ಜೂನ್ 2019 (09:25 IST)
ಲಂಡನ್: ವಿಶ್ವಕಪ್ ‍ಕ್ರಿಕೆಟ್ 2019 ರ  ಮೊದಲ ಪಂದ್ಯವಾಡುವ ಮೊದಲು ಟೀಂ ಇಂಡಿಯಾಗೆ ಮೊದಲ ಎದುರಾಳಿ ದ.ಆಫ್ರಿಕಾ ಪಾಳಯದಿಂದ ಗುಡ್ ನ್ಯೂಸ್‍ ಸಿಕ್ಕಿದೆ.

 
ಈಗಾಗಲೇ ಎರಡು ಪಂದ್ಯ ಸೋತು ಸುಣ್ಣವಾಗಿರುವ ದ.ಆಫ್ರಿಕಾಗೆ ಈಗ ವೇಗಿ ಲುಂಗಿ ನಿಗಿಡಿ ಗಾಯಾಳುವಾಗಿ ಭಾರತದ ವಿರುದ್ಧದ ಪಂದ್ಯದಿಂದ ಹೊರಗುಳಿಯಬೇಕಾಗಿದೆ.
 
ಜೂನ್ 6 ರಂದು ಮೊದಲ ಪಂದ್ಯ ನಡೆಯಲಿದ್ದು, ನಿಗಿಡಿ ಸ್ನಾಯುಸೆಳೆತದಿಂದ ಪಂದ್ಯವಾಡಲು ಸಾಧ್ಯವಾಗುತ್ತಿಲ್ಲ. ಮಹತ್ವದ ಪಂದ್ಯಕ್ಕೆ ನಿಗಿಡಿ ಗಾಯಾಳುವಾಗಿರುವುದು ಆಫ್ರಿಕಾಗೆ ದೊಡ್ಡ ಶಾಕ್ ನೀಡಿದರೆ ಭಾರತಕ್ಕೆ ನಿರಾಳವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :