ವಿಶ್ವಕಪ್ ಕ್ರಿಕೆಟ್ 2019: ಎರಡು ತಂಡಗಳ ಸೆಮಿಫೈನಲ್ ಭವಿಷ್ಯ ಈಗ ಟೀಂ ಇಂಡಿಯಾ ಕೈಯಲ್ಲಿ!

ಲಂಡನ್, ಗುರುವಾರ, 27 ಜೂನ್ 2019 (09:46 IST)

ಲಂಡನ್: ವಿಶ್ವಕಪ್ 2019 ರಲ್ಲಿ ಯಾವೆಲ್ಲಾ ತಂಡಗಳು ಸೆಮಿಫೈನಲ್ ಗೇರಬಹುದು ಎಂಬ ವಿಚಾರದಲ್ಲಿ ಇದೀಗ ಟೀಂ ಇಂಡಿಯಾ ಪಾತ್ರ ನಿರ್ಣಾಯಕವಾಗಲಿದೆ.


 
ನಾಲ್ಕನೇ ತಂಡಕ್ಕೆ ಈಗ ಇಂಗ್ಲೆಂಡ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವೆ ಪೈಪೋಟಿ ಶುರುವಾಗಿದೆ. ಆ ಪೈಕಿ ಇಂಗ್ಲೆಂಡ್ ಮತ್ತು ಬಾಂಗ್ಲಾ ಭವಿಷ್ಯ ಈಗ ಟೀಂ ಇಂಡಿಯಾ ವಿರುದ್ಧ ಆಡಲಿರುವ ಪಂದ್ಯದಲ್ಲಿ ನಿರ್ಣಯವಾಗಲಿದೆ.
 
ಜುಲೈ 2 ರಂದು ಬಾಂಗ್ಲಾದೇಶ ಭಾರತದ ವಿರುದ್ಧ ಸೆಣಸಲಿದ್ದು, ಆ ಪಂದ್ಯದಲ್ಲಿ ಗೆದ್ದರೆ ಅದರ ಸೆಮಿಫೈನಲ್ ಅವಕಾಶ ಹೆಚ್ಚಾಗಲಿದೆ. ಇತ್ತ ಇಂಗ್ಲೆಂಡ್ ಗೆ ಜುಲೈ 30 ರಂದು ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಗೆದ್ದರೆ ಸೆಮಿಫೈನಲ್ ಸ್ಥಾನ ಭದ್ರವಾಗಲಿದೆ. ಒಂದು ವೇಳೆ ಇಂಗ್ಲೆಂಡ್ ಈ ಪಂದ್ಯ ಸೋತರೆ ಮತ್ತೆ ಬಾಂಗ್ಲಾ ಮತ್ತು ಪಾಕ್ ಜತೆ ರನ್ ಸರಾಸರಿ ಅದೃಷ್ಟದ ಆಟವನ್ನು ನಂಬಿ ಕೂರಬೇಕಾಗುತ್ತದೆ.
 
ಇತ್ತ ಬಾಂಗ್ಲಾದೇಶಕ್ಕೂ ಟೀಂ ಇಂಡಿಯಾ ವಿರುದ್ಧ ಸೋತರೆ ಸೆಮಿಫೈನಲ್ ಹಾದಿ ಬಹುತೇಕ ಮುಚ್ಚಲಿದೆ. ಆಗ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ಪೈಪೋಟಿ ನಡೆಯಲಿದೆ. ಹೀಗಾಗಿ ಉಭಯ ತಂಡಗಳಿಗೆ ಈಗ ಟೀಂ ಇಂಡಿಯಾ ವಿರುದ್ಧದ ಪಂದ್ಯವೇ ನಿರ್ಣಾಯಕವಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ವಿಶ್ವಕಪ್ 2019: ಟಾಸ್ ಗೆದ್ದ ಟೀಂ ಇಂಡಿಯಾದಲ್ಲಿ ಯಾರು ಇನ್ ಯಾರು ಔಟ್?

ಲಂಡನ್: ವಿಶ್ವಕಪ್ 2019 ರ ಇಂದಿನ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗುತ್ತಿದ್ದು, ...

news

ಧೋನಿಯ ದಾಖಲೆ ಮುರಿಯಲು ಸಜ್ಜಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ

ಲಂಡನ್: ವಿಶ್ವಕಪ್ ನ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಧೋನಿಯ ದಾಖಲೆಯೊಂದನ್ನು ...

news

ಮುಂಬೈ ಆಸ್ಪತ್ರೆಯಿಂದ ಬಿಡುಗಡೆಯಾದ ಬ್ರಿಯಾನ್ ಲಾರಾ

ಮುಂಬೈ: ಹೃದಯ ತೊಂದರೆಗೆ ಸಿಲುಕಿ ಮುಂಬೈನ ಗ್ಲೋಬಲ್ ಆಸ್ಪತ್ರೆಗೆ ದಾಖಲಾಗಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ...

news

ವಿರಾಟ್ ಕೊಹ್ಲಿಯನ್ನು ಜೀಸಸ್ ಗೆ ಹೋಲಿಸಿದ ಕ್ರಿಕೆಟಿಗ ಯಾರು ಗೊತ್ತೇ?

ಲಂಡನ್: ಆಧುನಿಕ ಕ್ರಿಕೆಟ್ ನ ರನ್ ಮೆಷಿನ್ ಎಂದೇ ಜನ ಜನಿತವಾಗಿರುವ ವಿರಾಟ್ ಕೊಹ್ಲಿಯನ್ನು ಜನ ತಮ್ಮ ಆರಾಧ್ಯ ...