ಲಂಡನ್: ವಿಶ್ವಕಪ್ ಕೂಟದಲ್ಲಿ ಕಿರು ಅವಧಿಯ ಬ್ರೇಕ್ ನ ನಂತರ ಇಂದು ಟೀಂ ಇಂಡಿಯಾ ತನ್ನ ನಾಲ್ಕನೇ ಪಂದ್ಯವನ್ನು ದುರ್ಬಲ ಅಫ್ಘಾನಿಸ್ತಾನದ ವಿರುದ್ಧ ಆಡಲಿದೆ.ಈಗಾಗಲೇ ಗಾಯದಿಂದಾಗಿ ತಂಡದ ಸಮತೋಲನ ಕಾಯ್ದುಕೊಳ್ಳುವ ತಲೆಬಿಸಿಯಲ್ಲಿರುವ ನಾಯಕ ಕೊಹ್ಲಿ ಈ ಪಂದ್ಯವನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಕಾಣುವುದಿಲ್ಲ ಎಂದಿದ್ದಾರೆ. ಟೀಂ ಇಂಡಿಯಾಗೆ ಇದುವರೆಗೆ ಸೋಲು ಕಾಡಿಲ್ಲ. ಹೀಗಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಇದು ಸದವಕಾಶವಾಗಲಿದೆ.ಇನ್ನು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿರುವ ಶಿಖರ್ ಧವನ್ ಸ್ಥಾನದಲ್ಲಿ ಕೆಎಲ್ ರಾಹುಲ್