ಲಂಡನ್: ವಿಶ್ವಕಪ್ 2019 ರ ಕಣದಲ್ಲಿ ನಾಳೆ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ನ್ನು ಎದುರಿಸಲಿದೆ. ಹಲವು ಅಚ್ಚರಿ ಫಲಿತಾಂಶ ನೀಡುವ ಕಾರಣಕ್ಕೆ ವಿಂಡೀಸ್ ವಿರುದ್ಧ ಟೀಂ ಇಂಡಿಯಾ ಎಚ್ಚರಿಕೆಯಿಂದ ಸೆಣಸಬೇಕಿದೆ. ಈಗಾಗಲೇ ಅಫ್ಘಾನಿಸ್ತಾನ ವಿರುದ್ಧ ಭಾರತದ ಬ್ಯಾಟಿಂಗ್ ಹುಳುಕುಗಳು ಬಯಲಾಗಿದೆ. ಕಳೆದ ಪಂದ್ಯದಲ್ಲಿ ಪ್ರಯಾಸಕರ ಗೆಲುವು ಸಾಧಿಸಿದ್ದ ಟೀಂ ಇಂಡಿಯಾಗೆ ವಿಂಡೀಸ್ ವೇಗಿಗಳನ್ನು ಎದುರಿಸುವ ಸವಾಲು ಎದುರಾಗಿದೆ. ಆರಂಭಿಕರು ಅಡಿಪಾಯ ಹಾಕದೇ ಹೋದರೆ ಟೀಂ ಇಂಡಿಯಾ ಬ್ಯಾಟಿಂಗ್ ಕುಂಟುತ್ತದೆ