Widgets Magazine

ವಿಶ್ವಕಪ್ 2019: ಟಾಸ್ ಗೆದ್ದ ಟೀಂ ಇಂಡಿಯಾದಲ್ಲಿ ಯಾರು ಇನ್ ಯಾರು ಔಟ್?

ಲಂಡನ್| Krishnaveni K| Last Updated: ಗುರುವಾರ, 27 ಜೂನ್ 2019 (14:45 IST)
ಲಂಡನ್: ವಿಶ್ವಕಪ್ 2019 ರ ಇಂದಿನ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

 
ಒಂದೂ ಪಂದ್ಯವನ್ನು ಇದುವರೆಗೆ ಸೋಲದೆ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ ಈ ಪಂದ್ಯದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ಅಫ್ಘಾನಿಸ್ತಾನ ವಿರುದ್ಧ ಆಡಿದ ತಂಡವನ್ನೇ ಇಂದೂ ಕಣಕ್ಕಿಳಿಸಿದೆ.
 
ವೇಗದ ಬೌಲಿಂಗ್ ನಲ್ಲಿ ಜಸ್ಪ್ರೀತ್ ಬುಮ್ರಾ ಜತೆಗೆ ಮೊಹಮ್ಮದ್ ಶಮಿ ಇದ್ದರೆ ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಆಡುತ್ತಿದ್ದಾರೆ. ಅತ್ತ ವಿಂಡೀಸ್ ಕೂಟದಲ್ಲಿ ಮುಂದುವರಿಯಬೇಕಾದರೆ ಇಂದಿನ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.ಇದರಲ್ಲಿ ಇನ್ನಷ್ಟು ಓದಿ :