ವಿಶ್ವಕಪ್ 2019: ಕಿರಿಯರ ವಿಶ್ವಕಪ್ ಬಳಿಕ ಮತ್ತೆ ಸೆಮಿಫೈನಲ್ ನಲ್ಲಿ ಕೊಹ್ಲಿ-ಕೇನ್ ವಿಲಿಯಮ್ಸ್ ಮುಖಾಮುಖಿ

ಲಂಡನ್| Krishnaveni K| Last Modified ಸೋಮವಾರ, 8 ಜುಲೈ 2019 (11:10 IST)
ಲಂಡನ್: 2008 ರ ಅಂಡರ್ 19 ವಿಶ್ವಕಪ್ ಕೂಟದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್ ನಲ್ಲಿ ಪರಸ್ಪರ ಕಾದಾಡಿದ್ದವು. ವಿಶೇಷವೆಂದರೆ ಆಗ ಭಾರತ ತಂಡದ ನಾಯಕರಾಗಿದ್ದವರು ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಗೆ ಕೇನ್ ವಿಲಿಯಮ್ಸನ್ ಅವರೇ ನಾಯಕರಾಗಿದ್ದರು. ಅಂದು ವಿರಾಟ್ ಬಳಗ 3 ವಿಕೆಟ್ ಗಳಿಂದ ರೋಚಕವಾಗಿ ಗೆದ್ದಿತ್ತು.
 > ಅದಾದ ಬಳಿಕ ಇದೀಗ ಹಿರಿಯರ ವಿಶ್ವಕಪ್ ಕೂಟದ ಸೆಮಿಫೈನಲ್ ನಲ್ಲಿಯೇ ಉಭಯ ನಾಯಕರು ತಮ್ಮ ತಂಡಗಳೊಂದಿಗೆ ಎದುರುಬದುರಾಗುತ್ತಿರುವುದು ವಿಶೇಷ. ನಾಳೆ ಸೆಮಿಫೈನಲ್ ಸಮಯ ನಡೆಯಲಿದೆ.>   ಕೇವಲ ಕೊಹ್ಲಿ ಮಾತ್ರವಲ್ಲ, ಅಂದು ಅಂಡರ್ 19 ತಂಡದಲ್ಲಿ ಎದುರು ಬದುರಾಗಿದ್ದ ರವೀಂದ್ರ ಜಡೇಜಾ, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಇಂದು ಮತ್ತೆ ಎದುರಾಗುತ್ತಿದ್ದಾರೆ. ಹೀಗಾಗಿ ಈ ಪಂದ್ಯದಲ್ಲಿ ಕೀವೀಸ್ ನಾಯಕ ಹಳೆಯ ಸೇಡು ತೀರಿಸಿಕೊಳ್ಳುತ್ತಾರಾ ಅಥವಾ ಟೀಂ ಇಂಡಿಯಾ ತನ್ನ ಅಗ್ರಸ್ಥಾನಕ್ಕೆ ತಕ್ಕ ಆಟವಾಡಿ ಫೈನಲ್ ತಲುಪುತ್ತಾ ಕಾದು ನೋಡಬೇಕಿದೆ.ಇದರಲ್ಲಿ ಇನ್ನಷ್ಟು ಓದಿ :