ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರ ನಿನ್ನೆಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಗೆ ಆಸ್ಟ್ರೇಲಿಯಾ ವಿರುದ್ಧ ಗೆಲ್ಲುವ ಎಲ್ಲಾ ಅವಕಾಶಗಳಿತ್ತು. ಹಾಗಿದ್ದೂ ಒಂದೇ ತಪ್ಪಿಗೆ ಪಂದ್ಯವನ್ನೇ ಕಳೆದುಕೊಂಡಿತು.ಆ ಒಂದು ತಪ್ಪನ್ನು ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಪಂದ್ಯದ ನಂತರ ಹೇಳಿಕೊಂಡಿದ್ದಾರೆ. ಈ ಪಂದ್ಯದಲ್ಲಿ ಆರಂಭದಿಂದಲೂ ಪರದಾಡುತ್ತಿದ್ದ ಆಸೀಸ್ 200 ರ ಗಡಿ ದಾಟಲೂ ಕಷ್ಟವಾಗುತ್ತಿತ್ತು.ಆದರೆ ಕೊನೆಯಲ್ಲಿ ಬಂದ ನಥನ್ ಕಲ್ಟ್ನರ್ ನಿಲೆ ಆಸೀಸ್ ಇನಿಂಗ್ಸ್ ಗತಿಯನ್ನೇ ಬದಲಿಸಿದರು.