Widgets Magazine

ವಿಶ್ವಕಪ್ 2019: ಭಾರತದ ಮುಂದಿನ ಭೇಟೆ ಯಾರು ಗೊತ್ತಾ?

ಲಂಡನ್| Krishnaveni K| Last Modified ಮಂಗಳವಾರ, 18 ಜೂನ್ 2019 (08:57 IST)
ಲಂಡನ್: ವಿಶ್ವಕಪ್ ಕ್ರಿಕೆಟ್ 2019 ರಲ್ಲಿ ಆಡಿದ ಮೂರು ಪಂದ್ಯಗಳನ್ನೂ ಗೆದ್ದು ಅಜೇಯವಾಗಿ ಮುಂದುವರಿದಿರುವ ಟೀಂ ಇಂಡಿಯಾಕ್ಕೆ ಮುಂದಿನ ಎದುರಾಳಿ ದುರ್ಬಲ ಅಫ್ಘಾನಿಸ್ತಾನ.

 
ಜೂನ್ 22 ಕ್ಕೆ ಭಾರತ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಸೌಥಾಂಪ್ಟನ್ ನಲ್ಲಿ ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಈ ಪಂದ್ಯ ಆರಂಭವಾಗಲಿದೆ.
 
ಅಫ್ಘಾನಿಸ್ತಾನ ದುರ್ಬಲ ತಂಡವಾಗಿರುವುದರಿಂದ ಭಾರತಕ್ಕೆ ಈ ಪಂದ್ಯವನ್ನು ಗೆದ್ದು ಅಂಕಪಟ್ಟಿಯಲ್ಲಿ ಮೇಲೇರುವ ಅವಕಾಶವಿದೆ. ಇದಾದ ಬಳಿಕ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಬೇಕಿದೆ. ಹೀಗಾಗಿ ಭಾರತಕ್ಕೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಎಲ್ಲಾ ಅವಕಾಶಗಳಿವೆ.
ಇದರಲ್ಲಿ ಇನ್ನಷ್ಟು ಓದಿ :