ಮುಂಬೈ: ಈ ಬಾರಿ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಭಾಗವಾಗಿರುವ ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್ ವಿಶಿಷ್ಟ ದಾಖಲೆ ಮಾಡಲಿದ್ದಾರೆ.ಈ ಇಬ್ಬರೂ ಆಟಗಾರರು ಈ ಹಿಂದೆ ಧೋನಿ ನೇತೃತ್ವದಲ್ಲಿ ಭಾರತ ಗೆದ್ದಿದ್ದ 2011 ರ ವಿಶ್ವಕಪ್ ತಂಡದ ಭಾಗವಾಗಿದ್ದರು. ಇದೀಗ ಮತ್ತೊಮ್ಮೆ ವಿಶ್ವಕಪ್ ತಂಡವನ್ನು ಇಬ್ಬರೂ ಪ್ರತಿನಿಧಿಸುತ್ತಿದ್ದಾರೆ. ಈ ಪೈಕಿ ಅಶ್ವಿನ್ ಮೊದಲ ಪಂದ್ಯ ಮಾತ್ರ ಆಡಿದ್ದಾರೆ. ಇಂದಿನ ಫೈನಲ್ ಪಂದ್ಯದಲ್ಲೂ ಅವರು ಆಡುವುದು ಅನುಮಾನವಾಗಿದೆ.