ಅಹಮ್ಮದಾಬಾದ್: ವಿಶ್ವಕಪ್ ಫೈನಲ್ ನಲ್ಲಿ ಟ್ರಾವಿಸ್ ಹೆಡ್-ಲಬುಶೇನ್ ಜೋಡಿ ಭಾರತೀಯ ಬೌಲರ್ ಗಳನ್ನು ಬೆಂಡೆತ್ತಿ ಆಸ್ಟ್ರೇಲಿಯಾ ಗೆಲುವನ್ನು ಖಚಿತಪಡಿಸುತ್ತಿದ್ದಂತೇ ಭಾರತೀಯ ಫ್ಯಾನ್ಸ್ ತೀವ್ರ ನಿರಾಸೆಗೊಳಗಾದರು.ಸ್ಟೇಡಿಯಂನಲ್ಲಿ ನಿನ್ನೆಯ ಪಂದ್ಯಕ್ಕೆ 1.3 ಲಕ್ಷ ಫ್ಯಾನ್ಸ್ ಸೇರಿದ್ದರು. ಹೆಚ್ಚಿನವರೂ ಭಾರತೀಯ ಸಮರ್ಥಕರೇ ಆಗಿದ್ದರು. ಇಡೀ ಮೈದಾನವೇ ನೀಲಿ ಬಣ್ಣದಿಂದ ಕಂಗೊಳಿಸುತ್ತಿತ್ತು.ಆದರೆ ಆಸ್ಟ್ರೇಲಿಯಾ ಗೆಲುವು ಸಮೀಪಿಸುತ್ತಿದ್ದಂತೇ ನಿರಾಸೆಗೊಂಡ ಫ್ಯಾನ್ಸ್ ಮೈದಾನದಿಂದಲೇ ಹೊರನಡೆಯಲು ಶುರು ಮಾಡಿದರು. ಪಂದ್ಯ ಮುಗಿಯುವ ಮೊದಲೇ ಅರ್ಧಕ್ಕರ್ಧ ಪ್ರೇಕ್ಷಕರು ಮೈದಾನದಿಂದ ಹೊರಬರಲು ಶುರು