Photo Courtesy: Twitterಅಹಮ್ಮದಾಬಾದ್: ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನ ಪಂದ್ಯ ನಡೆಯಲಿರುವ ಅಹಮ್ಮದಾಬಾದ್ ಪಿಚ್ ಹೇಗಿದೆ ನೋಡೋಣ.ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಅತ್ಯುತ್ತಮ ಫಾರ್ಮ್ ನಲ್ಲಿದ್ದು, ಎಂತಹದ್ದೇ ಪಿಚ್ ಇದ್ದರೂ ಎದುರಾಳಿಗಳಿಗೆ ಕಂಟಕವಾಗುತ್ತಲೇ ಬಂದಿದ್ದಾರೆ. ಇದೀಗ ಫೈನಲ್ ಪಂದ್ಯಕ್ಕೆ ತಯಾರಾಗಿರುವ ಪಿಚ್ ಯಾರಿಗೆ ಸಹಕಾರಿ? ಟಾಸ್ ಗೆದ್ದರೆ ಏನು ಮಾಡಬೇಕು?ಫೈನಲ್ ಪಂದ್ಯಕ್ಕೆ ತಯಾರಾಗಿರುವ ಪಿಚ್ ನಿಧಾನಗತಿಯದ್ದಾಗಿದ್ದು, ಇಲ್ಲಿ ರನ್ ಹೊಳೆ ಹರಿಯುವ ಸಂಭವ ಕಡಿಮೆ.