ಲಂಡನ್: ಇಂದು ವಿಶ್ವಕಪ್ ಕೂಟದಲ್ಲಿ ವಿಶ್ವವೇ ಎದುರು ನೋಡುತ್ತಿರುವ ಭಾರತ-ಪಾಕಿಸ್ತಾನ ಪಂದ್ಯ ನಡೆಯಲಿದ್ದು, ಅಭಿಮಾನಿಗಳು ಪಂದ್ಯ ನಡೆಯಬಹುದೇ ಅಥವಾ ಮಳೆ ಮತ್ತೆ ಕಾಟ ಕೊಡಬಹುದೇ ಎಂಬ ಆತಂಕದಲ್ಲಿದ್ದಾರೆ.ಯಾಕೆಂದರೆ ಹವಾಮಾನ ಇಲಾಖೆಯ ವರದಿಯೂ ಆತಂಕಪಡುವಂತೆಯೇ ಇದೆ. ಪಂದ್ಯ ಸ್ಥಳೀಯ ಕಾಲಮಾನ ಪ್ರಕಾರ 10.30 ಕ್ಕೆ ಆರಂಭವಾಗಲಿದೆ. ಆದರೆ ಹವಾಮಾನ ಇಲಾಖೆ ಪ್ರಕಾರ ಮಧ್ಯಾಹ್ನ 12 ರಿಂದ 1 ಗಂಟೆಯೊಳಗೆ ಸಣ್ಣನೆಯ ಮಳೆ ಬರುವ ಸಾಧ್ಯತೆಯಿದೆ.ಹೀಗಾಗಿ ಪಂದ್ಯಕ್ಕೆ ಅಡಚಣೆಯಾಗುವ ಸಾಧ್ಯತೆಯಿದೆ. ಇದು ಭಾರತ-ಪಾಕಿಸ್ತಾನ