ಮುಂಬೈ: ಡಬ್ಲ್ಯುಪಿಎಲ್ ನಲ್ಲಿ ಇಂದು ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳುತ್ತಿದ್ದು, ಆರ್ ಸಿಬಿ ಕೊನೆಯ ಪಂದ್ಯವನ್ನಾಡುತ್ತಿದೆ.ಇಂದು ಒಟ್ಟು ಎರಡು ಪಂದ್ಯಗಳಿವೆ. ಮೊದಲನೆಯ ಪಂದ್ಯದಲ್ಲಿ ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿವೆ. ಮುಂಬೈ ಈಗಾಗಲೇ ಪ್ಲೇ ಆಫ್ ಗೆ ತೇರ್ಗಡೆಯಾಗಿರುವುದರಿಂದ ಈ ಪಂದ್ಯ ಅದಕ್ಕೆ ಔಪಚಾರಿಕವಷ್ಟೇ. ಆದರೆ ಆರಂಭದಲ್ಲಿ ಸೋಲನ್ನೇ ಅನುಭವಿಸಿದ್ದ ಆರ್ ಸಿಬಿ ಕಳೆದ ಎರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದ್ದು, ಹ್ಯಾಟ್ರಿಕ್ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳುವ