Photo Courtesy: Twitterಮುಂಬೈ: ಮಹಿಳಾ ಕ್ರಿಕೆಟ್ ನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಬಿಸಿಸಿಐ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪುರುಷರಂತೇ ಮಹಿಳೆಯರಿಗೂ ಐಪಿಎಲ್ ಆಯೋಜಿಸಿದ್ದು, ಇಂದಿನಿಂದ ಟೂರ್ನಿಗೆ ಚಾಲನೆ ಸಿಗಲಿದೆ.ಮುಂಬೈನ ಬ್ರೆಬೋರ್ನ್ ಮೈದಾನ ಮತ್ತು ಡಿ ವೈ ಪಾಟೀಲ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು ಐದು ತಂಡಗಳು ಕಣದಲ್ಲಿವೆ. ಮಹಿಳೆಯರಿಗೆ ಈ ಪಂದ್ಯಗಳಿಗೆ ಉಚಿತ ಪ್ರವೇಶವಿರುವುದು ವಿಶೇಷ. ಹೆಚ್ಚಿನ ಪಂದ್ಯಗಳು ಮಧ್ಯಾಹ್ನ 3.30 ಮತ್ತು ಸಂಜೆ 7.30 ಕ್ಕೆ ಆರಂಭವಾಗಲಿದೆ. ಸ್ಪೋರ್ಟ್ಸ್ 18