ರಿಷಬ್ ಪಂತ್ ರೂಪದಲ್ಲಿ ವೃದ್ಧಿಮಾನ್ ಸಹಾಗೆ ಒಲಿದ ಅದೃಷ್ಟ

ಮುಂಬೈ, ಶುಕ್ರವಾರ, 27 ಸೆಪ್ಟಂಬರ್ 2019 (08:50 IST)

ಮುಂಬೈ: ಒಂದು ಕಾಲದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಿರ ವಿಕೆಟ್ ಕೀಪರ್ ಆಗಿದ್ದ ವೃದ್ಧಿಮಾನ್ ಸಹಾ ಗಾಯಗೊಂಡ ಬಳಿಕ ತಂಡದಿಂದ ಹೊರಹೋಗುವ ಪರಿಸ್ಥಿತಿ ಬಂದಿತ್ತು.

 


ಆ ಬಳಿಕ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ರಿಷಬ್ ಪಂತ್ ರನ್ನು ಬೆಳೆಸುವ  ಅವಸರದಲ್ಲಿ ಸಹಾರನ್ನು ಮರೆತೇಬಿಟ್ಟಿತ್ತು. ತಂಡದಲ್ಲಿದ್ದರೂ ಆಡುವ  ಅವಕಾಶ ಸಿಗಲಿಲ್ಲ. ಈಗ ರಿಷಬ್ ಪಂತ್ ಫಾರ್ಮ್ ಕಳೆದುಕೊಂಡಿದ್ದಕ್ಕೆ ವೃದ್ಧಿಮಾನ್ ಸಹಾಗೆ ಅದೃಷ್ಟ ಒಲಿಯುವ ಲಕ್ಷಣ ತೋರುತ್ತಿದೆ.
 
ಅಕ್ಟೋಬರ್ 2 ರಿಂದ ದ.ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ರಿಷಬ್ ಪಂತ್ ಬದಲಿಗೆ ವೃದ್ಧಿಮಾನ್ ಸಹಾ ವಿಕೆಟ್ ಕೀಪರ್ ಆಗಿ ಆಡುವ ಸಾಧ್ಯತೆಯಿದೆ. ಸದ್ಯಕ್ಕೆ ರಿಷಬ್ ಗೆ ಸೀಮಿತ ಓವರ್ ಗಳಲ್ಲಿ ಅವಕಾಶ ನೀಡಿ ವೃದ್ಧಿಮಾನ್ ಸಹಾರನ್ನೇ ಟೆಸ್ಟ್ ನಲ್ಲಿ ಮುಂದುವರಿಸಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಚಿಂತನೆ ನಡೆಸುತ್ತಿದೆ. ಹೀಗಾಗಿ ಮತ್ತೆ ವೃದ್ಧಿಮಾನ್ ಟೆಸ್ಟ್ ಗ್ಲೌಸ್ ತೊಡಲು ಸಿದ್ಧತೆ ಮಾಡುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಿಷಬ್ ಪಂತ್ ಗೆ ಬೈಬೇಡಿ, ನಾವು ಸರಿ ಮಾಡ್ತೀವಿ ಎಂದ ಕೋಚ್ ರವಿಶಾಸ್ತ್ರಿ

ಮುಂಬೈ: ಟೀಂ ಇಂಡಿಯಾದಲ್ಲಿ ಸಾಕಷ್ಟು ಅವಕಾಶ ಸಿಕ್ಕರೂ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ವಿಕೆಟ್ ...

news

ರಾಹುಲ್ ದ್ರಾವಿಡ್ ಸ್ವಹಿತಾಸಕ್ತಿ ಹುದ್ದೆ ವಿಚಾರಣೆ ಇಂದು

ಮುಂಬೈ: ಸ್ವಹಿತಾಸಕ್ತಿ ಹುದ್ದೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಸಂಜೀವ್ ...

news

ರಾಷ್ಟ್ರೀಯ ತಂಡಕ್ಕೆ ಮರಳಲು ಕೆಎಲ್ ರಾಹುಲ್, ರಿಷಬ್ ಪಂತ್ ಗೆ ಇದೇ ಚಾನ್ಸ್

ಮುಂಬೈ: ಫಾರ್ಮ್ ಕಳೆದುಕೊಂಡು ಟೀಕೆಗೊಳಗಾಗುತ್ತಿರುವ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಗೆ ಈಗ ತಮ್ಮ ...

news

ಟೀಂ ಇಂಡಿಯಾಗೆ ದೊಡ್ಡ ಆಘಾತ: ದ.ಆಫ್ರಿಕಾ ಸರಣಿಯಿಂದ ಜಸ್ಪ್ರೀತ್ ಬುಮ್ರಾ ಔಟ್

ಮುಂಬೈ: ದ.ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಿಂದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ...