ಕೋಲ್ಕೊತ್ತಾ: ಈ ಮೊದಲು ಟೀಂ ಇಂಡಿಯಾದಿಂದ ತಮ್ಮನ್ನು ಕೈಬಿಟ್ಟಿರುವ ವಿಚಾರಕ್ಕೆ ಬೇಸರ ಹೊರಹಾಕಿದ್ದ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಈಗ ಪ.ಬಂಗಾಲ ಪರ ರಣಜಿ ಆಡಲೂ ಹಿಂದೇಟು ಹಾಕುತ್ತಿದ್ದಾರೆ.ರಣಜಿ ಟ್ರೋಫಿ ಆರಂಭಿಕ ಪಂದ್ಯಗಳಲ್ಲಿ ವೈಯಕ್ತಿಕ ಕಾರಣ ನೀಡಿ ಸಹಾ ಆಡಿರಲಿಲ್ಲ. ಇದೇ ಕಾರಣಕ್ಕೆ ಸಿಎಬಿ ಅಧಿಕಾರಿಯೊಬ್ಬರು ಸಹಾ ಬದ್ಧತೆ ಪ್ರಶ್ನಿಸಿದ್ದರು. ಇದು ಸಹಾ ಬೇಸರಕ್ಕೆ ಕಾರಣವಾಗಿದೆ.ಇದೀಗ ರಣಜಿ ಟ್ರೋಫಿ ನಾಕೌಟ್ ಹಂತದ ಪಂದ್ಯಕ್ಕೆ ವೃದ್ಧಿಮಾನ್ ಸಹಾರನ್ನು ಆಯ್ಕೆ ಮಾಡಿದರೂ ಆಡಲು