ಕೋಲ್ಕೊತ್ತಾ: ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಪಡೆದ ಅದ್ಭುತ ಕ್ಯಾಚ್ ಒಂದು ನೋಡುಗರ ಮನಸೂರೆಗೊಂಡಿದೆ. ಬಾಂಗ್ಲಾ ಬ್ಯಾಟ್ಸ್ ಮನ್ ಮೊಹಮ್ಮದುಲ್ಲಾ ಬ್ಯಾಟ್ ಅಂಚಿಗೆ ತಗುಲಿ ಬಂದ ಬಾಲ್ ನ್ನು ಡೈವ್ ಮಾಡಿ ಒಂದೇ ಕೈಯಿಂದ ಹಿಡಿದ ವೃದ್ಧಿಮಾನ್ ಸಹಾರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಹಾ ಕ್ಯಾಚ್ ಪಡೆಯುತ್ತಿದ್ದಂತೇ ಪಕ್ಕದಲ್ಲೇ ಇದ್ದ ಕೊಹ್ಲಿ ಅವರನ್ನು ಅಪ್ಪಿಕೊಂಡು ಅಭಿನಂದಿಸಿದ್ದಾರೆ. ಇತ್ತ