ದಿ ಓವಲ್: ಎರಡನೇ ಬಾರಿಯಾದರೂ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಗೆಲ್ಲುವ ಟೀಂ ಇಂಡಿಯಾದ ಕನಸು ಕೊನೆಗೂ ಕನಸಾಗಿಯೇ ಉಳಿಯಿತು. ಆಸ್ಟ್ರೇಲಿಯಾ 209 ರನ್ ಗಳಿಂದ ಫೈನಲ್ ಗೆದ್ದು ಡಬ್ಲ್ಯುಟಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.ದ್ವಿತೀಯ ಇನಿಂಗ್ಸ್ ನಲ್ಲಿ 444 ರನ್ ಗಳ ಬೃಹತ್ ಮೊತ್ತ ಗುರಿ ಬೆನ್ನತ್ತಿ ಹೊರಟ ಟೀಂ ಇಂಡಿಯಾ ಐದನೇ ದಿನವಾದ ಇಂದು ಕೇವಲ 234 ರನ್ ಗಳಿಗೆ ಆಲೌಟ್ ಆಯಿತು. ಎರಡೂ ಇನಿಂಗ್ಸ್ ಗಳಲ್ಲಿ