ಸೌಥಾಂಪ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ವರ್ತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಕೊನೆಯ ಪಂದ್ಯವಾಡುತ್ತಿರುವ ನ್ಯೂಜಿಲೆಂಡ್ ವಿಕೆಟ್ ಕೀಪರ್ ಬಿಜೆ ವಾಲ್ಟಿಂಗ್ ಗೆ ಕೊಹ್ಲಿ ಬ್ಯಾಟಿಂಗ್ ಮಾಡುತ್ತಿರುವಾಗ ಬಳಿ ಸಾಗಿ ಕೈ ಕುಲುಕಿ ಮುಂದಿನ ಜೀವನಕ್ಕೆ ಶುಭ ಕೋರಿದ್ದಾರೆ. 35 ವರ್ಷದ ವಾಲ್ಟಿಂಗ್ ಗೆ ಇಂದೇ ವೃತ್ತಿ ಜೀವನದ ಕೊನೆಯ ದಿನ.ಈ ಭಾವನಾತ್ಮಕ ಗಳಿಗೆಯಲ್ಲಿ ಕೊಹ್ಲಿ