ಲಂಡನ್: ಈಗಾಗಲೇ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಮುಗಿದಿದ್ದು, ಮತ್ತೊಂದು ವಿಶ್ವ ಟೆಸ್ಟ್ ಸರಣಿಯನ್ನು ಎದುರಿಸಲು ಭಾರತ ಸಜ್ಜಾಗಿದೆ. ಮೂಲಗಳ ಪ್ರಕಾರ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಿಂದಲೇ ಎರಡನೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿ ಆರಂಭವಾಗುತ್ತಿದೆ. ಆಗಸ್ಟ್ 2021 ರಿಂದ ಜೂನ್ 2023 ರವರೆಗೆ ನಡೆಯಲಿರುವ ವಿವಿಧ ದೇಶಗಳ ಟೆಸ್ಟ್ ಸರಣಿಯ ಅಂಕಗಳನ್ನು ಆಧರಿಸಿ ಫೈನಲ್ ಗೆ ಎರಡು ತಂಡಗಳು ಆಯ್ಕೆಯಾಗಲಿವೆ.ಒಟ್ಟಾರೆಯಾಗಿ ಈ