ರೋಡ್ ಸೇಫ್ಟೀ ಟೂರ್ನಮೆಂಟ್ ನಲ್ಲಿ ಮತ್ತೆ ಯುವಿ ಸಿಕ್ಸರ್, ಸಚಿನ್ ಬ್ಯಾಟಿಂಗ್ ಜಾದೂ

ಮುಂಬೈ| Krishnaveni K| Last Modified ಗುರುವಾರ, 18 ಮಾರ್ಚ್ 2021 (10:00 IST)
ಮುಂಬೈ: ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ನಡೆಯುತ್ತಿರುವ ಹಿರಿಯ ಕ್ರಿಕೆಟಿಗರ ರೋಡ್ ಸೇಫ್ಟೀ ಟೂರ್ನಮೆಂಟ್ ನಲ್ಲಿ ನಿನ್ನೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಯುವರಾಜ್ ಸಿಂಗ್ ಮತ್ತು ಸಚಿನ್ ತೆಂಡುಲ್ಕರ್ ಬ್ಯಾಟಿಂಗ್ ವೈಭವ ಮರುಕಳಿಸಿದೆ.
 

ಆರಂಭಿಕರಾಗಿ ಕಣಕ್ಕಿಳಿದ ನಾಯಕ ಸಚಿನ್ 43 ಎಸೆತಗಳಲ್ಲಿ ಭರ್ಜರಿ 65 ರನ್ ಗಳಿಸಿ ಔಟಾದರು. ಇತ್ತ ಯುವರಾಜ್ ಸಿಂಗ್ ತಮ್ಮ ಹೊಡೆಬಡಿಯ ಬ್ಯಾಟಿಂಗ್ ಪ್ರದರ್ಶಿಸಿ 20 ಎಸೆತಗಳಲ್ಲಿ 49 ರನ್ ಸಿಡಿಸಿದರು. 19 ನೇ ಓವರ್ ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿ ತಂಡದ ಮೊತ್ತವನ್ನು 218 ಕ್ಕೇರಿಸಿದರು.
 
ಈ ಮೊತ್ತವನ್ನು ಬ್ರಿಯಾನ್ ಲಾರಾ ನೇತೃತ್ವದ ವಿಂಡೀಸ್ ತಂಡ ಆತ್ಮವಿಶ್ವಾಸದಿಂದಲೇ ಬೆನ್ನತ್ತಿತು. ಲಾರಾ 28 ಎಸೆತಗಳಲ್ಲಿ 46 ರನ್ ಸಿಡಿಸಿದರು. ಆದರೆ ಭಾರತದ ಬೌಲರ್ ಗಳಾದ ವಿನಯ್ ಕುಮಾರ್, ಇರ್ಫಾನ್ ಪಠಾಣ್ ಅವರ ಸಾಹಸದಿಂದಾಗಿ 12 ರನ್ ಗಳಿಂದ ಸೋತಿತು. ಈ ಮೂಲಕ ಭಾರತ ಈ ಟೂರ್ನಮೆಂಟ್ ನ ಫೈನಲ್ ತಲುಪಿದರು.
ಇದರಲ್ಲಿ ಇನ್ನಷ್ಟು ಓದಿ :