ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಯುವರಾಜ್ ಸಿಂಗ್

ಮುಂಬೈ| Krishnaveni K| Last Modified ಸೋಮವಾರ, 2 ಆಗಸ್ಟ್ 2021 (09:00 IST)
ಮುಂಬೈ: ನಿನ್ನೆ ಫ್ರೆಂಡ್ ಶಿಪ್ ದಿನದ ಅಂಗವಾಗಿ ಟೀಂ ಇಂಡಿಯಾ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ತಮ್ಮ ಕ್ರಿಕೆಟ್ ಸ್ನೇಹಿತರ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು.
 

ಆದರೆ ಈ ವಿಡಿಯೋದಲ್ಲಿ ತಮ್ಮ ಜೊತೆ ಆಡಿದ ಹೆಚ್ಚು ಕಡಿಮೆ ಎಲ್ಲಾ ಕ್ರಿಕೆಟಿಗರ ಫೋಟೋವೋ ಇದೆ. ಆದರೆ ಧೋನಿಯನ್ನು ಮಾತ್ರ ಯುವಿ ಕೈಬಿಟ್ಟಿದ್ದಾರೆ. ಇದು ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
 
ಧೋನಿ ತಮ್ಮ ನಿವೃತ್ತಿ ಸಂದರ್ಭದಲ್ಲಿ ಎಲ್ಲಾ ಕ್ರಿಕೆಟಿಗರ ಫೋಟೋ ಹಾಕಿ ಧನ್ಯವಾದ ಸಲ್ಲಿಸಿದ್ದರು. ಆದರೆ ಯುವಿ ಮಾತ್ರ ಯಾವತ್ತೂ ಧೋನಿಯನ್ನು ಕಡೆಗಣಿಸುತ್ತಾರೆ. ಅವರು ಸ್ವಾರ್ಥಿ ಎಂದು ಧೋನಿ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಇನ್ನೊಂದೆಡೆ ಕೆಲವರು ಯುವಿ ಬೆಂಬಲಕ್ಕೆ ಬಂದಿದ್ದು, ಅವರು ತಮ್ಮ ನಿಜವಾದ ಸ್ನೇಹಿತರ ವಿಡಿಯೋ ಹಾಕಿದ್ದಾರೆ. ಧೋನಿಯನ್ನು ಅವರು ಸ್ನೇಹಿತ ಅಂತ ಅಂದುಕೊಂಡಿಲ್ಲದೇ ಇರಬಹುದು.ಹೀಗಾಗಿ ಅವರ ಫೋಟೋ ಹಾಕಿಲ್ಲ. ಇದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :