ಮುಂಬೈ: ಟೀಂ ಇಂಡಿಯಾ ಕ್ರಿಕೆಟ್, ಕಿಂಗ್ಸ್ ಇಲೆವೆನ್ ಪಂಜಾಬ್ ಆಟಗಾರ ಯುವರಾಜ್ ಸಿಂಗ್ ವಿಶೇಷ ಅಭಿಮಾನಿಯೊಬ್ಬರನ್ನು ಭೇಟಿ ಮಾಡಿದ್ದಾರೆ.ಸ್ವತಃ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಯುವರಾಜ್ ಸಿಂಗ್ ಚಿಕಿತ್ಸೆಯ ನಂತರ ಚೇತರಿಸಿಕೊಂಡು ಮರಳಿ ಕ್ರಿಕೆಟ್ ಕಣಕ್ಕೆ ಆಗಮಿಸಿದ್ದರು. ಇದೀಗ ಸ್ವತಃ ಯುವರಾಜ್ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ 11 ವರ್ಷದ ಬಾಲಕ ರಾಕಿ ಎಂಬಾತನನ್ನು ಭೇಟಿ ಮಾಡಿದ್ದಲ್ಲದೇ, ಜೆರ್ಸಿಯೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಫೋಟೋ ಪ್ರಕಟಿಸಿರುವ ಯುವಿ,