ಚಾಂಪಿಯನ್ಸ್ ಟ್ರೋಫಿ ಆರಂಭದಲ್ಲೇ ಭಾರತ ತಂಡಕ್ಕೆ ಆಘಾತವಾಗಿದೆ. ಐಪಿಎಲ್`ನಲ್ಲಿ ಒಳ್ಳೆಯ ಫಾರ್ಮ್`ನಲ್ಲಿದ್ದ ಯುವಿ ಅನಾರೋಗ್ಯಕ್ಕೀಡಾಗಿರುವ ಬಗ್ಗೆ ವರದಿಯಾಗಿದೆ. ಲಾರ್ಡ್ಸ್ ಮೈದಾನದಲ್ಲಿ ತಂಡದ ಅಭ್ಯಾಸದಲ್ಲಿ ಯುವಿ ಕಾಣಿಸಿಕೊಂಡಿಲ್ಲ. ಅನಾರೋಗ್ಯಕ್ಕೀಡಾಗಿರುವ ಯುವಿ ನಾಳೆ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಆಡುವ ಸಾಧ್ಯತೆ ಕ್ಷೀಣ ಎನ್ನಲಾಗುತ್ತಿದೆ. ಆದರೆ, ಜೂನ್ 1ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗುತ್ತಿದ್ದು, ಅಷ್ಟೊತ್ತಿಗೆ ಯುವಿ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ಯುವಿ ಅಲಭ್ಯರಾದರೆ ಭಾರತ ತಂಡಕ್ಕೆ ಹಿನ್ನಡೆಯಾಗುವುದು ಖಂಡಿತ.ಈ