ಟೀಂ ಇಂಡಿಯಾ ಆಯ್ಕೆ ಸಮಿತಿಯೇ ಸರಿಯಿಲ್ಲ ಎಂದ ಯುವರಾಜ್ ಸಿಂಗ್

ಮುಂಬೈ| Krishnaveni K| Last Modified ಮಂಗಳವಾರ, 5 ನವೆಂಬರ್ 2019 (10:39 IST)
ಮುಂಬೈ: ಇತ್ತೀಚೆಗಷ್ಟೇ ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಟೀಂ ಇಂಡಿಯಾ ಆಯ್ಕೆ ಸಮಿತಿ ಬಗ್ಗೆ ಟೀಕೆ ಮಾಡಿ ವಿವಾದಕ್ಕೊಳಗಾಗಿದ್ದರು. ಇದೀಗ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಆಯ್ಕೆ ಸಮಿತಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
 

ಧೋನಿ ಭವಿಷ್ಯದ ಬಗ್ಗೆ ಮಾಧ‍್ಯಮದವರು ಪ್ರಶ್ನಿಸಿದಾಗ ಯುವಿ ‘ಅದು ನಾನು ಹೇಳೋ ಹಾಗಿಲ್ಲ ಬಾಸ್. ನೀವು ನಮ್ಮ ಗ್ರೇಟ್ ಆಯ್ಕೆಗಾರರನ್ನೇ ಕೇಳಬೇಕು’ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
 
ಅಷ್ಟೇ ಅಲ್ಲದೆ, ‘ನಮಗೆ ಇನ್ನೂ ಉತ್ತಮ ಆಯ್ಕೆಗಾರರು ಬೇಕು. ಆಯ್ಕೆ ಸಮಿತಿ ಕೆಲಸ ಅಷ್ಟು ಸುಲಭವಲ್ಲ. ಆದರೆ ಈಗಿನ ಕಾಲಕ್ಕೆ ತಕ್ಕಂತೆ ಸದ್ಯದ ಆಯ್ಕೆ ಸಮಿತಿ ಯೋಚನೆ ಮಾಡುತ್ತಿಲ್ಲ. ನಮಗೆ ಖಂಡಿತವಾಗಿಯೂ ಉತ್ತಮ ಆಯ್ಕೆಗಾರರ ಅಗತ್ಯವಿದೆ’ ಎಂದು ಯುವಿ ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :