ವೃತ್ತಿಬದುಕಿನ ಕೊನೆಯ ಕ್ಷಣದಲ್ಲಿ ನನಗೆ ಹೀಗೆ ಮಾಡಬಾರದಿತ್ತು! ಯುವರಾಜ್ ಸಿಂಗ್ ಆಕ್ರೋಶ

ಮುಂಬೈ, ಶುಕ್ರವಾರ, 27 ಸೆಪ್ಟಂಬರ್ 2019 (09:27 IST)

ಮುಂಬೈ: ತನ್ನ ವೃತ್ತಿ ಬದುಕಿನ ಕೊನೆಯ ಕ್ಷಣದಲ್ಲಿ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನಡೆಸಿಕೊಂಡ ರೀತಿಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.


 
ಟೀಂ ಇಂಡಿಯಾದಲ್ಲಿ ಯಾವುದೇ ಆಟಗಾರನಿಗೂ ಉತ್ತಮ ವಿದಾಯ ಸಿಗುವುದಿಲ್ಲ ಎನ್ನುವುದು ಯುವರಾಜ್ ವಿಷಯದಲ್ಲೂ ನಿಜವಾಗಿತ್ತು. ಈ ಬಗ್ಗೆ ಇದೀಗ ಯುವಿ ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದಾರೆ.
 
ಯುವರಾಜ್ ಸಿಂಗ್ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು ಎಂಬ ಸುದ್ದಿಯಿತ್ತು. ಆದರೆ ಈ ಬಗ್ಗೆ ಇದೀಗ ಮಾತನಾಡಿರುವ ಯುವರಾಜ್ ನಾನು ಯೋ ಯೋ ಟೆಸ್ಟ್ ನಲ್ಲಿ ಪಾಸಾಗಿದ್ದರೂ ನನ್ನನ್ನು ಮೂಲೆಗುಂಪು ಮಾಡಲಾಯಿತು.
 
ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ನನ್ನ ಜತೆ ಸರಿಯಾಗಿ ಸಂವಹನ ನಡೆಸಲಿಲ್ಲ. ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಪಂದ್ಯ ಪ್ರಶಸ್ತಿ ಸ್ವೀಕರಿಸಿದ ಮೇಲೂ ಮುಂದಿನ ವೆಸ್ಟ್ ಇಂಡೀಸ್ ಸರಣಿಗೆ ನನ್ನನ್ನು ಆಯ್ಕೆ ಮಾಡದೇ ಇದ್ದಾಗ ಅಚ್ಚರಿಯಾಯಿತು. ಅದನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ’ ಎಂದು ಯುವ ಬಹಿರಂಗಪಡಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಜಸ್ಪ್ರೀತ್ ಬುಮ್ರಾ ಈ ವರ್ಷ ಕ್ರಿಕೆಟ್ ಆಡುವಂತೆಯೇ ಇಲ್ಲ!

ಮುಂಬೈ: ಟೀಂ ಇಂಡಿಯಾ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಗೊಳಗಾಗಿದ್ದಾರೆ. ಹೀಗಾಗಿ ಅವರು ಈ ...

news

ರಿಷಬ್ ಪಂತ್ ರೂಪದಲ್ಲಿ ವೃದ್ಧಿಮಾನ್ ಸಹಾಗೆ ಒಲಿದ ಅದೃಷ್ಟ

ಮುಂಬೈ: ಒಂದು ಕಾಲದಲ್ಲಿ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಿರ ವಿಕೆಟ್ ಕೀಪರ್ ಆಗಿದ್ದ ವೃದ್ಧಿಮಾನ್ ಸಹಾ ...

news

ರಿಷಬ್ ಪಂತ್ ಗೆ ಬೈಬೇಡಿ, ನಾವು ಸರಿ ಮಾಡ್ತೀವಿ ಎಂದ ಕೋಚ್ ರವಿಶಾಸ್ತ್ರಿ

ಮುಂಬೈ: ಟೀಂ ಇಂಡಿಯಾದಲ್ಲಿ ಸಾಕಷ್ಟು ಅವಕಾಶ ಸಿಕ್ಕರೂ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿರುವ ವಿಕೆಟ್ ...

news

ರಾಹುಲ್ ದ್ರಾವಿಡ್ ಸ್ವಹಿತಾಸಕ್ತಿ ಹುದ್ದೆ ವಿಚಾರಣೆ ಇಂದು

ಮುಂಬೈ: ಸ್ವಹಿತಾಸಕ್ತಿ ಹುದ್ದೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಸಂಜೀವ್ ...