ಮುಂಬೈ: ಟೀಂ ಇಂಡಿಯಾದ ಇಂದಿನ ವೇಗಿಗಳಿಗೆ ಆದರ್ಶರೆನಿಸಿಕೊಂಡಿರುವ ಖ್ಯಾತ ವೇಗಿ ಜಹೀರ್ ಖಾನ್ ಮುಂಬೈ ಇಂಡಿಯನ್ಸ್ ತಂಡದ ಕೋಚಿಂಗ್ ತಂಡವನ್ನು ಸೇರಿಕೊಳ್ಳಲಿದ್ದಾರೆ.ಎಲ್ಲಾ ಸರಿಯಾಗಿದ್ದರೆ ಜಹೀರ್ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಆಗಬೇಕಿತ್ತು. ಆದರೆ ಒಳ ರಾಜಕೀಯದಿಂದಾಗಿ ಅದು ಸಾಧ್ಯವಾಗಲಿಲ್ಲ. ಇಂದು ಭಾರತ ತಂಡದಲ್ಲಿ ಮಿಂಚುತ್ತಿರುವ ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಹಲವು ಬಾರಿ ತಮಗೆ ಜಹೀರ್ ಖಾನ್ ಪ್ರೇರಣೆ ಎಂದಿದ್ದರು.ಜಹೀರ್ ಕರಾರುವಾಕ್ ಯಾರ್ಕರ್ ದಾಳಿಯನ್ನು ಇಂದಿಗೂ ಕ್ರಿಕೆಟ್ ಪ್ರೇಮಿಗಳು ಮರೆಯಲಾಗದು.