ನೆದರ್‌ಲೆಂಡ್ಸ್ ಅಚ್ಚರಿಯ ಫಲಿತಾಂಶ: ಇಂಗ್ಲೆಂಡ್ ವಿರುದ್ಧ ಗೆಲುವು

ಸೋಮವಾರ, 31 ಮಾರ್ಚ್ 2014 (19:00 IST)

PR
PR
ಟಿ20ಯಲ್ಲಿ ಎರಡನೇ ಬಾರಿ ನೆದರ್ಲ್ಯಾಂಡ್ಸ್ ತಂಡ ಇಂಗ್ಲೆಂಡ್ ತಂಡವನ್ನು 45 ರನ್‌ಗಳಿಂದ ಸೋಲಿಸುವ ಮೂಲಕ ಅಚ್ಚರಿಯ ಫಲಿತಾಂಶ ನೀಡಿದೆ. ಮುದಸ್ಸರ್ ಬುಕಾರಿ ಮತ್ತು ಲೊಗಾನ್ ವಾನ್ ಬೀಕ್ ತಲಾ ಮೂರು ವಿಕೆಟ್ ಕಬಳಿಸಿದರು. ನೆದರ್‌ಲ್ಯಾಂಡ್ಸ್ ಅಮೋಧ ಫೀಲ್ಡಿಂಗ್ ಕೂಡ ಗೆಲುವಿಗೆ ನೆರವಾಯಿತು.ಇಂಗ್ಲೆಂಡ್ ತನ್ನ ಇನ್ನಿಂಗ್ಸ್‌ನಲ್ಲಿ ಹೊಡೆದಿದ್ದು ಕೇವಲ ನಾಲ್ಕು ಬೌಂಡರಿಗಳು. ರವಿ ಬೊಪಾರಾ ಅವರ 18 ರನ್ ಅಗ್ರ ಸ್ಕೋರ್ ಆಗಿದ್ದು, 14 ಎಸೆತಗಳು ಬಾಕಿವುಳಿದಿರುವಂತೆ 88ಕ್ಕೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಆಲೌಟಾಯಿತು.

ಇಂಗ್ಲೆಂಡ್ ಟಾಸ್ ಗೆದ್ದು ನೆದರ್ಲೆಂಡ್ಸ್ ವಿರುದ್ಧ ಬೌಲಿಂಗ್ ತೆಗೆದುಕೊಂಡಿತು. ನೆದರ್ಲೆಂಡ್ಸ್ 5 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿತು. ನೆದರ್‌ಲೆಂಡ್ಸ್ ಪರ ಬರೇಸಿ 48 ರನ್ ಗಳಿಸಿದರು. ನಂತರ ಆಡಲಿಳಿದ ಇಂಗ್ಲೆಂಡ್ ನೆದರ್‌ಲೆಂಡ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 88 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನ್ನಪ್ಪಿತು. ವ್ಯಾನ್ ಬೀಕ್ 9 ರನ್‌ ನೀಡಿ 3 ವಿಕೆಟ್ ಮತ್ತು ಬುಕಾರಿ 12 ರನ್ ನೀಡಿ 3 ವಿಕೆಟ್ ಪಡೆದು ಮಾರಕ ಬೌಲಿಂಗ್ ದಾಳಿ ಮಾಡಿದ್ದರಿಂದ ಇಂಗ್ಲೆಂಡ್ ವಿಕೆಟ್‌ಗಳು ಒಂದರ ಹಿಂದೊಂದರಂತೆ ಬಿದ್ದು ಪೆವಿಲಿಯನ್‌ಗೆ ಮರಳಿದರು. 17. 4 ಓವರುಗಳಲ್ಲಿ 88ರನ್‌ಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ನೆದರ್‌ಲೆಂಡ್ಸ್ ಗೆಲುವಿನ ಮೂಲಕ ಅಚ್ಚರಿಯ ಫಲಿತಾಂಶ ನೀಡಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

ಭಾರತೀಯ ಹಾಕಿ ತಂಡ ಯೂರೋಪ್‌‌ಗೆ ತೆರಳಲು ಸಜ್ಜಾಗಿದೆ

ನವದೆಹಲಿ :ಮುಂದಿ ದಿನಗಳಲ್ಲಿ ನಡೆಯಲಿರುವ ಹಾಕಿ ವಿಶ್ವ ಕಪ್‌‌ಗಾಗಿ ಸಿದ್ದತೆ ನಡೆಸುತ್ತಿರುವ ಇಂಡಿಯನ್‌ ...

ಧೋನಿ ಹೇಳಿಕೆ ಪರಿಶೀಲಿಸಲು ಅವಕಾಶ ಕೋರಿ ಸುಪ್ರೀಂಕೋರ್ಟ್‌ಗೆ ಬಿಸಿಸಿಐ ಅರ್ಜಿ

ನವದೆಹಲಿ: ಐಪಿಎಲ್ ಬೆಟ್ಟಿಂಗ್ ಮತ್ತು ಫಿಕ್ಸಿಂಗ್ ಹಗರಣದ ತನಿಖೆ ನಡೆಸುತ್ತಿರುವ ಮುದ್ಗಲ್ ಸಮಿತಿಯ ಮುಂದೆ ...

ಟೆನಿಸ್‌‌‌ ಶ್ರೇಯಾಂಕ: ಭಾರತೀಯರ ಶ್ರೇಯಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲ

ನವದೆಹಲಿ : ಭಾರತದ ಡೆವಿಸ್‌‌‌‌ಕಪ್‌ನಲ್ಲಿ ಸೋಮದೇವ್ ದೇವವರ್ಮನ್ ಕೊರಿಯಾ ವಿರುದ್ದ ಗೆಲುವನ್ನು ಸಾಧಿಸುವುದರ ...

ಯುವಿಯನ್ನು ಸಮರ್ಥಿಸಿಕೊಂಡು ಸಚಿನ್ ಬ್ಯಾಟಿಂಗ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ...