‘ಸಚಿನ್ ತೆಂಡುಲ್ಕರ್ ಕ್ರಿಕೆಟ್ ದಿಗ್ಗಜ. ಅವರು ಆಡಿದಷ್ಟು ಸುದೀರ್ಘ ಸಮಯ ಭಾರತೀಯ ಕ್ರಿಕೆಟ್ ನಲ್ಲಿ ನಾನು ಆಡುತ್ತಿರುತ್ತೇನೆ ಎನ್ನಲಾಗದು. ಆದರೆ ಆಡುವಷ್ಟು ದಿನ, ನನ್ನ ಕೊನೆಯ ದಿನದವರೆಗೂ, ಅತ್ಯುತ್ತಮವಾದ ಕೊಡುಗೆ ನೀಡಲು ಬಯಸುತ್ತೇನೆ’ ಹೀಗೆಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.