ಮುಂಬೈ: ಟಿ20 ಮಾದರಿ ಕ್ರಿಕೆಟ್ ನಿಂದ ಧೋನಿ ನಿವೃತ್ತಿಯಾಗಬೇಕು ಎಂದು ಆಗ್ರಹಿಸಿದ್ದ ಮಾಜಿ ವೇಗಿ ಅಜಿತ್ ಅಗರ್ಕರ್ ರನ್ನು ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೂ ಮೊದಲು ಅಭಿಮಾನಿಗಳೂ ಸಾಮಾಜಿಕ ಜಾಲತಾಣದಲ್ಲಿ ಅಗರ್ಕರ್ ಮಾತನಾಡುವುದು ನೋಡಿದರೆ ಪ್ರಧಾನಿ ಕಾರ್ಯನಿರ್ವಹಣೆ ಬಗ್ಗೆ ಮಾತನಾಡುವ ಶಾಸಕನ ಹಾಗಿದೆ ಎಂದು ಲೇವಡಿ ಮಾಡಿದ್ದರು.ಧೋನಿ ಬಗ್ಗೆ ಹೀಗೆಲ್ಲಾ ಕಾಮೆಂಟ್ ಮಾಡಲು ಈ ಅಗರ್ಕರ್ ಯಾರು? ಎಂದು ಕಿರ್ಮಾನಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.