ಮುಂಬೈ: ನಾಯಕತ್ವ ತ್ಯಜಿಸಿದ ಮೇಲೆ ನಿರಾಳವಾಗಿರುವ ಮಹೇಂದ್ರ ಸಿಂಗ್ ಧೋನಿ ಸದ್ಯಕ್ಕೆ ನೆಟ್ ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅಲ್ಲಿಗೆ ತಾನು ಯಾವುದೇ ಸವಾಲಿಗೂ ಸಿದ್ಧ ಎಂದು ಸಂದೇಶ ಕೊಟ್ಟಿದ್ದಾರೆ.ಸದ್ಯಕ್ಕೆ ಯಾವುದೇ ಒತ್ತಡಗಳಿಲ್ಲದೆ ಕೂಲ್ ಆಗಿರುವ ಅವರು ಸಹ ಆಟಗಾರರಿಗೆ ಬೌಲಿಂಗ್ ಮಾಡಿ ಖುಷಿಪಟ್ಟರು. ಹಿಂದೆಯೂ ಹಲವು ಪಂದ್ಯಗಳಲ್ಲಿ ಧೋನಿ ಕೆಲ ಹೊತ್ತು ಕೀಪಿಂಗ್ ಗ್ಲೌಸ್ ಕಳಚಿಟ್ಟು ಬೌಲಿಂಗ್ ಮಾಡಿದ್ದೂ ಇದೆ.ಅದೇ ರೀತಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ತಯಾರಾಗುತ್ತಿರುವ