ಚೆನ್ನೈ: ಈ ಬಾರಿಯ ಐಪಿಎಲ್ ಆರಂಭಕ್ಕೂ ಮೊದಲೇ ಚೆನ್ನೈ ಆಂತರಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ಒಂದೆಡೆ ಕೊರೋನಾ, ಮತ್ತೊಂದೆಡೆ ಸುರೇಶ್ ರೈನಾ ಕೂಟದಿಂದ ಹೊರಬಿದ್ದಿದ್ದು, ಸಾಲದೆಂಬಂತೆ ಈಗ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಸಿಎಸ್ ಕೆ ತಂಡಕ್ಕೆ ಕೊಕ್ ಕೊಡಲು ಸಿದ್ಧರಾಗಿದ್ದಾರೆ. ರೈನಾ ವೈಯಕ್ತಿಕ ಕಾರಣ ನೀಡಿ ಹೊರಬಂದಿದ್ದರೂ ಅವರು ತಂಡದ ಜತೆಗೆ ವೈಮನಸ್ಯ ಮಾಡಿಕೊಂಡಿದ್ದರು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಈ ನಡುವೆ ಚೆನ್ನೈ ತಂಡದಲ್ಲಿ ಕೊರೋನಾ ಪ್ರಕರಣಗಳು