ಕಿಂಗ್ಸ್ಟನ್ : ಅಜಿಂಕ್ಯಾ ರಹಾನೆ ಕಠಿಣ ಸನ್ನಿವೇಶಗಳಲ್ಲಿ ಬ್ಯಾಟಿಂಗ್ಗೆ ಕೊಡುಗೆ ನೀಡುವ ಬ್ಯಾಟ್ಸ್ಮನ್ ಆಗಿ ನೆಲೆಗೊಂಡಿದ್ದಾರೆ. ಜಮೈಕಾದಲ್ಲಿನ ಎರಡನೇ ಟೆಸ್ಟ್ನಲ್ಲಿ ಕಳೆದ ನಾಲ್ಕು ಇನ್ನಿಂಗ್ಸ್ಗಳಲ್ಲಿ ತಮ್ಮ ಮೂರನೇ ಶತಕವನ್ನು ರಹಾನೆ ದಾಖಲಿಸಿ ಭಾರತವನ್ನು ಸುಭದ್ರ ಸ್ಥಾನದಲ್ಲಿ ಇರಿಸಿದರು. ಈ ಭವ್ಯ ಶತಕದಿಂದ ರಹಾನೆ ಅಪರೂಪದ ಸಾಧನೆ ಮಾಡಿದ್ದು ಸತತ 8 ಸರಣಿಯ ಟೆಸ್ಟ್ಪಂದ್ಯದಲ್ಲಿ ಕನಿಷ್ಟ ಒಂದು ಇನ್ನಿಂಗ್ಸ್ನಲ್ಲಿ 90 ರನ್ ಸ್ಕೋರ್ ಮಾಡಿದ ಮೊದಲ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೆ ಪಾತ್ರರಾದರು.