Widgets Magazine

ಹೆಣ್ಣು ಮಗುವಿಗೆ ತಂದೆಯಾದ ಕ್ರಿಕೆಟಿಗ ಅಜಿಂಕ್ಯಾ ರೆಹಾನೆ

ವಿಶಾಖಪಟ್ಟಣ| Krishnaveni K| Last Modified ಶನಿವಾರ, 5 ಅಕ್ಟೋಬರ್ 2019 (10:56 IST)
ವಿಶಾಖಪಟ್ಟಣ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವಾಡುತ್ತಿರುವ ಟೀಂ ಇಂಡಿಯಾ ಕ್ರಿಕೆಟಿಗ ಅಜಿಂಕ್ಯಾ ರೆಹಾನೆಗೆ ಗುಡ್ ನ್ಯೂಸ್ ಸಿಕ್ಕಿದೆ. ರೆಹಾನೆ ಪತ್ನಿ ರಾಧಿಕಾ ಹೆಣ್ಣು ಮಗುವಿಗೆ ಜನ್ಮನೀಡಿದ್ದಾರೆ.

 
ಅಜಿಂಕ್ಯಾ ರೆಹಾನೆ ಮತ್ತು ಪತ್ನಿ ರಾಧಿಕಾ 2014 ರಲ್ಲಿ ವಿವಾಹವಾಗಿದ್ದರು. ಈ ದಂಪತಿಗೆ ಈಗ ಮೊದಲ ಮಗುವಿಗೆ ಪೋಷಕರಾದ ಸಂಭ್ರಮ.
 
ಜುಲೈ ತಿಂಗಳಲ್ಲಿ ಅಜಿಂಕ್ಯಾ ರೆಹಾನೆ ತಮ್ಮ ಪತ್ನಿ ಗರ್ಭಿಣಿ ಎನ್ನುವ ವಿಚಾರವನ್ನು ಹೊರಹಾಕಿದ್ದರು. ರೆಹಾನೆ ದಂಪತಿಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಟ್ವಿಟರ್ ಮೂಲಕ ಶುಭ ಹಾರೈಸಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :