ಕೊಹ್ಲಿ ಜತೆ ಸುಲಭವಾಗಿ ಬ್ಯಾಟಿಂಗ್ ಮಾಡುವುದು ಹೇಗೆಂದು ಬಹಿರಂಗಪಡಿಸಿದ ಅಜಿಂಕ್ಯಾ ರೆಹಾನೆ

ಪುಣೆ| Krishnaveni K| Last Modified ಶನಿವಾರ, 12 ಅಕ್ಟೋಬರ್ 2019 (09:16 IST)
ಪುಣೆ: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ದ್ವಿತೀಯ ದಿನ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರೆಹಾನೆ ಯಶಸ್ವೀ ಜತೆಯಾಟ ನಿಭಾಯಿಸಿದ್ದು ಹೇಗೆಂದು ವಿವರಿಸಿದ್ದಾರೆ.
 

ಕೊಹ್ಲಿ ಅದ್ಭುತ ಬ್ಯಾಟ್ಸ್ ಮನ್. ಭಾರತ ಈ ಪಂದ್ಯದಲ್ಲಿ ಒಬ್ಬ ಬ್ಯಾಟ್ಸ್ ಮನ್ ನ್ನು ಕೈ ಬಿಟ್ಟಿತ್ತು. ಹೀಗಾಗಿ ನಾವಿಬ್ಬರೂ ಜತೆಯಾಟ ನಡೆಸುವುದು ಮುಖ್ಯವಾಗಿತ್ತು. ನಾವಿಬ್ಬರೂ ಒಬ್ಬರಿಗೊಬ್ಬರು ಜತೆಯಾಗಿ ಬ್ಯಾಟಿಂಗ್ ಮಾಡುವುದನ್ನು ಎಂಜಾಯ್ ಮಾಡುತ್ತೇವೆ.
 
ಮುಖ್ಯವಾಗಿ ನಾವು ಬ್ಯಾಟಿಂಗ್ ಮಾಡುವಾಗ ಮುಕ್ತವಾಗಿ ಸಂವಹನ ಮಾಡುತ್ತೇವೆ. ಹೀಗಾಗಿ ಲೆಕ್ಕಾಚಾರದೊಂದಿಗೆ ಆಟ ಆಡುತ್ತೇವೆ. ನಾವಿಬ್ಬರೂ 500 ಪ್ಲಸ್ ರನ್ ಗಳಿಸಬೇಕೆಂದು ಮಾತಾಡಿಕೊಂಡಿದ್ದೆವು. ಆದರೆ ಕೊಹ್ಲಿ ಮತ್ತು ರವೀಂದ್ರ ಜಡೇಜಾ (91) ಬ್ಯಾಟಿಂಗ್ ಮಾಡಿದ ರೀತಿಯಿಂದ ನಮಗೆ 600 ಪ್ಲಸ್ ರನ್ ಗಳಿಸುವುದು ಸುಲಭವಾಯಿತು ಎಂದು ರೆಹಾನೆ ವಿವರಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :