ಅಜಿಂಕ್ಯಾ ರೆಹಾನೆಯೇ ಟೀಂ ಇಂಡಿಯಾ ನಾಯಕರಾಗಲಿ

ಮುಂಬೈ| Krishnaveni K| Last Modified ಬುಧವಾರ, 20 ಜನವರಿ 2021 (10:56 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಪ್ರಮುಖ ಆಟಗಾರರಿಲ್ಲದೇ ಇದ್ದರೂ ಯುವ ಆಟಗಾರರನ್ನು ಕಟ್ಟಿಕೊಂಡು ಸರಣಿ ಗೆದ್ದ ಅಜಿಂಕ್ಯಾ ರೆಹಾನೆ ಮುಂದೆಯೂ ಟೆಸ್ಟ್ ಕ್ರಿಕೆಟ್ ನಲ್ಲಿ ತಂಡವನ್ನು ಮುನ್ನಡೆಸಲಿ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.
 

ಪ್ರಮುಖ ಆಟಗಾರರು ಕೈಕೊಟ್ಟರೂ ತಾಳ್ಮೆಯಿಂದ ತಂಡ ಮುನ್ನಡೆಸಿದ ರೆಹಾನೆ ಯಾರೂ ಊಹಿಸದ ರೀತಿಯಲ್ಲಿ ಗೆಲುವು ದಾಖಲಿಸಿದ್ದಕ್ಕೆ ನೆಟ್ಟಿಗರು ಇನ್ನು ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲಿ ಎಂದು ಆಗ್ರಹಿಸಿದ್ದಾರೆ. ಕೊಹ್ಲಿ ಇದ್ದಾಗ ತಂಡ ಹೀನಾಯ ಪ್ರದರ್ಶನ ನೀಡಿತ್ತು. ಆದರೆ ರೆಹಾನೆ ನಾಯಕರಾದ ಮೇಲೆ ತಂಡದಲ್ಲಿ ಹೊಸ ಭರವಸೆ ಮೂಡಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :