ಅಲಸ್ಟೈರ್ ಕುಕ್ ಸಚಿನ್ ದಾಖಲೆ ಮುರಿಯಬಹುದು: ಸುನಿಲ್ ಗವಾಸ್ಕರ್

ನವದೆಹಲಿ| guna| Last Modified ಬುಧವಾರ, 1 ಜೂನ್ 2016 (11:40 IST)
ಸಚಿನ್ ತೆಂಡೂಲ್ಕರ್  ಅವರ 15, 921 ರನ್‌ ಟೆಸ್ಟ್  ದಾಖಲೆ ಸುರಕ್ಷಿತವಾಗಿಲ್ಲ, ಅಲಸ್ಟೈರ್ ಕುಕ್ ಸಚಿನ್ ದಾಖಲೆಯನ್ನು ಮುರಿಯಬಹುದು ಎಂದು ಭಾರತದ ಮಾಜಿ ಓಪನರ್ ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟರು. ಶ್ರೀಲಂಕಾ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ  10,000 ರನ್ ಸ್ಕೋರ್ ಮಾಡಿದ 12ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕುಕ್ ಪಾತ್ರರಾಗಿದ್ದಾರೆ. 31 ವರ್ಷ ಮತ್ತು 158 ದಿನಗಳ ಅತೀ ಕಿರಿಯ ವಯಸ್ಸಿನಲ್ಲಿ 10,000 ರನ್ ಸ್ಕೋರ್ ಮಾಡಿದ ಆಟಗಾರ ಕುಕ್ ,ಸಚಿನ್ ಅವರು ಅತೀ ಕಿರಿಯವಯಸ್ಸಿನಲ್ಲಿ 10 ಸಾವಿರ ರನ್ ಸ್ಕೋರ್ ಮಾಡಿದ ದಾಖಲೆಯನ್ನು ಮುರಿದಿದ್ದಾರೆ.
 
 ಪ್ರಸಕ್ತ ಕುಕ್ ತೆಂಡೂಲ್ಕರ್ ಅವರ 15, 921 ಟೆಸ್ಟ್ ಸ್ಕೋರ್  ದಾಖಲೆ ಮುರಿಯಲು 5879 ರನ್ ದೂರದಲ್ಲಿದ್ದು, ಕುಕ್ ಈ ದಾಖಲೆಯನ್ನು ಮುರಿಯಬಹುದು ಎಂದು ಗವಾಸ್ಕರ್ ನಂಬಿದ್ದಾರೆ.  ಕುಕ್ ಅವರಿಗೆ ಇನ್ನೂ ವಯಸ್ಸಿದ್ದು, ಇಂಗ್ಲೆಂಡ್ ಇನ್ನಷ್ಟು ಟೆಸ್ಟ್‌ಗಳನ್ನು ಆಡಬಹುದು ಎಂದು ಗವಾಸ್ಕರ್ ಪ್ರತಿಕ್ರಿಯಿಸಿದರು. 
 
 ಡರ್ ಹ್ಯಾಂ ಟೆಸ್ಟ್ ಬಳಿಕ ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ ಇನ್ನೊಂದು ಟೆಸ್ಟ್ ಆಡಲಿದ್ದು, ಬಳಿಕ ಪಾಕ್ ವಿರುದ್ಧ ನಾಲ್ಕು ಟೆಸ್ಟ್‌ ಪಂದ್ಯಗಳನ್ನು ಆಡಲಿದೆ. ಕುಕ್ ತಂಡವು ಬಾಂಗ್ಲಾದೇಶ ಮತ್ತು ಭಾರತಕ್ಕೆ ಪ್ರವಾಸ ಹೋಗಲಿದ್ದು ಅಲ್ಲಿ ಐದು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆದ್ದರಿಂದ ಕುಕ್ ಮುಂದಿನ 6 ತಿಂಗಳಲ್ಲಿ 12 ಟೆಸ್ಟ್ ಪಂದ್ಯಗಳನ್ನು ಆಡಲಿದ್ದಾರೆ.
 
 ಮುಂಬರುವ ವರ್ಷಗಳಲ್ಲಿ ಇಂಗ್ಲೆಂಡ್ ಇನ್ನಷ್ಟು ಟೆಸ್ಟ್ ಪಂದ್ಯಗಳನ್ನು ಆಡಲಿದೆ. 2017/18ನೇ ಸೀಸನ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಇನ್ನೂ 6 ಟೆಸ್ಟ್ ಪಂದ್ಯಗಳನ್ನು ಇಂಗ್ಲೆಂಡ್ ಆಡಲಿದ್ದು, ಬಳಿಕ ಆಸ್ಟ್ರೇಲಿಯಾದಲ್ಲಿ ಆಷಸ್ ಸರಣಿ ಆಡಲಿದೆ. ಇಂಗ್ಲೆಂಡ್ ವರ್ಷಕ್ಕೆ 10 ಟೆಸ್ಟ್ ಪಂದ್ಯಗಳನ್ನು ಆಡುವುದರೊಂದಿಗೆ ಕುಕ್ ದೈಹಿಕವಾಗಿ ಫಿಟ್ ಆಗಿದ್ದು, ಸ್ಥಿರ ಪ್ರದರ್ಶನ ನೀಡಿದರೆ ತೆಂಡೂಲ್ಕರ್ ದಾಖಲೆ ಮುರಿಯುವುದು ಕಷ್ಟವೇನಲ್ಲ ಎಂದು ಗವಾಸ್ಕರ್ ವಿಶ್ಲೇಷಿಸಿದರು. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 ಇದರಲ್ಲಿ ಇನ್ನಷ್ಟು ಓದಿ :