ದುಬೈ: ಐಸಿಸಿಯ ತಾಂತ್ರಿಕ ಸಮಿತಿಗೆ ಮತ್ತೆ ಟೀಂ ಇಂಡಿಯಾ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಮುಖ್ಯಸ್ಥರಾಗಿ ಪುನರಾಯ್ಕೆಗೊಂಡಿದ್ದಾರೆ.ಈ ಮೂಲಕ ಸತತ ಮೂರನೇ ಬಾರಿಗೆ ಅನಿಲ್ ಕುಂಬ್ಳೆಗೆ ತಾಂತ್ರಿಕ ಸಮಿತಿಯ ಹೊಣೆ ನೀಡಲಾಗಿದೆ. 2012 ರಿಂದ ಅನಿಲ್ ಕುಂಬ್ಳೆ ಐಸಿಸಿ ತಾಂತ್ರಿಕ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಕ್ರಿಕೆಟ್ ನ ನಿಯಮಗಳಲ್ಲಿ ಪರಿಷ್ಕರಣೆ, ಹೊಸ ನಿಯಮ ರೂಪಿಸುವುದು ಇತ್ಯಾದಿ ಈ ತಾಂತ್ರಿಕ ಸಮಿತಿಯ ಮುಖ್ಯ ಕೆಲಸವಾಗಿದೆ.ದುಬೈನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.