ಮುಂಬೈ: ಅನಿಲ್ ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ನಡುವೆ ಸಾಮರಸ್ಯವಿಲ್ಲ.. ಬಿಸಿಸಿಐಗೆ ಕುಂಬ್ಳೆ ಕೋಚ್ ಆಗಿ ಮುಂದುವರಿಯುವುದು ಇಷ್ಟವಲ್ಲ ಎಂದು ವರದಿಯಾದ ಬೆನ್ನಲ್ಲೂ ಅನಿಲ್ ಕುಂಬ್ಳೆ ಮತ್ತೊಮ್ಮೆ ಕೋಚ್ ಹುದ್ದೆಗೆ ಅರ್ಜಿ ಹಾಕಿದ್ದಾರೆಂದು ವರದಿಯಾಗಿದೆ. ಪ್ರಸಕ್ತ ಕೋಚ್ ಆಗಿರುವ ಕಾರಣ ಅನಿಲ್ ಕುಂಬ್ಳೆ ಮತ್ತೊಮ್ಮೆ ಅರ್ಜಿ ಆಹ್ವಾನಿಸಬೇಕಿರಲಿಲ್ಲ. ಅವರು ನೇರವಾಗಿ ಕೋಚ್ ಸ್ಪರ್ದೆಗೆ ಎಂಟ್ರಿ ಪಡೆಯಬಹುದಿತ್ತು. ಆದರೂ ಕುಂಬ್ಳೆ ಅರ್ಜಿ ಹಾಕಿರುವುದು ಅಚ್ಚರಿಯಾಗಿದೆ.ಹಾಗಿದ್ದರೂ ಕುಂಬ್ಳೆ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ.