ನವದೆಹಲಿ: ಅಪ್ಪಟ ಕನ್ನಡಿಗ, ಟೀಂ ಇಂಡಿಯಾ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ ಹಿಂದೊಮ್ಮೆ ಪಾಕಿಸ್ತಾನ ಸ್ಪಿನ್ನ ರ್ ಸಕ್ಲೇನ್ ಮುಷ್ತಾಕ್ ರಿಗೆ ವೈದ್ಯರಿಗೂ ಸಾಧ್ಯವಾಗದ ಸಹಾಯ ಮಾಡಿದ್ದರಂತೆ. ಈ ಬಗ್ಗೆ ಸ್ವತಃ ಸಕ್ಲೇನ್ ಮುಷ್ತಾಕ್ ಈಗ ಹೇಳಿಕೊಂಡಿದ್ದಾರೆ. ವೈದ್ಯರಿಗೂ ನನ್ನ ಸಮಸ್ಯೆ ಸರಿಪಡಿಸಲಾಗದೇ ಇದ್ದಾಗ ಅಣ್ಣ ಅನಿಲ್ ಕುಂಬ್ಳೆ ನನಗೆ ಸಹಾಯ ಮಾಡಿದ್ದರು ಎಂದಿದ್ದಾರೆ.ನನಗೆ ಕಣ್ಣಿನ ಸಮಸ್ಯೆಯಿತ್ತು. ಯಾವ ವೈದ್ಯರಿಂದಲೂ ಸರಿಪಡಿಸಲು ಸಾಧ್ಯವಾಗಿರಲಿಲ್ಲ. ಆಗ ನಾನು ಅನಿಲ್ ಕುಂಬ್ಳೆ ಬಳಿ