ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ಒಂದು ವರ್ಷ ಅಧಿಕಾರದಲ್ಲಿದ್ದ ಸ್ಪಿನ್ ಗಾರುಡಿಗ ಅನಿಲ್ ಕುಂಬ್ಳೆ ನಾಯಕ ವಿರಾಟ್ ಕೊಹ್ಲಿ ಜತೆ ಹೊಂದಾಣಿಕೆ ಕೊರತೆಯಿಂದ ಪದತ್ಯಾಗ ಮಾಡಿದ್ದರು.ಆದರೆ ಕುಂಬ್ಳೆ ಇದುವರೆಗೆ ಅದರ ಬಗ್ಗೆ ಎಲ್ಲಿಯೂ ಮಾತನಾಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಆ ದಿನಗಳನ್ನು ನೆನೆಪಿಸಿಕೊಂಡಿದ್ದಾರೆ.ಒಂದು ವರ್ಷ ಟೀಂ ಇಂಡಿಯಾ ಕೋಚ್ ಆಗಿದ್ದು ಸ್ಮರಣೀಯ. ಒಂದು ವರ್ಷ ನಾವು ಉತ್ತಮ ಸಾಧನೆ ಮಾಡಿದ್ದೆವು. ಆದರೆ ಅದರ ಅಂತ್ಯ ಇನ್ನೂ