ಬೆಂಗಳೂರು: ಸ್ಪಿನ್ ಮೋಡಿಗಾರ ಅನಿಲ್ ಕುಂಬ್ಳೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಷ್ಟೇ ಹೆಸರು ಮಾಡಿದ್ದರೂ ಇಂದಿಗೂ ತಮ್ಮ ಭಾಷೆ, ನೆಲ ಮರೆತಿಲ್ಲ. ಅದನ್ನು ಅವರು ಕವನ ವಾಚನ ಸವಾಲು ಸ್ವೀಕರಿಸುವ ಮೂಲಕ ಸಾಬೀತುಪಡಿಸಿದ್ದಾರೆ.