ಕಾರು ಹರಿಸಿ ಮಹಿಳೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ಭಾರತೀಯ ಕ್ರಿಕೆಟ್ ಆಟಗಾರ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್ ಬಾಬುರಾವ್ ರಹಾನೆ ಅವರನ್ನು ಕೊಲ್ಹಾಪುರ ಪೊಲೀಸರು ಬಂಧಿಸಿದ್ದಾರೆ. ಮಧುಕರ್ ಬಾಬುರಾವ್ ರಹಾನೆ ಅವರು ಕುಟುಂಬದವರೊಂದಿಗೆ ಹ್ಯೂಂಡೈ ಐ20 ಕಾರನ್ನು 4ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸುತ್ತಿದ್ದಾಗ ಕಂಗಲ್ ಎಂಬ ಪ್ರದೇಶದಲ್ಲಿ ಆಶಾತಾಯಿ ಕಾಂಬ್ಳೆ ಎಂಬ ಮಹಿಳೆಗೆ ಢಿಕ್ಕಿ ಹೊಡೆದಿದ್ದು, ತೀವ್ರಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿಸಿದ