ಮುಂಬೈ: ಟಿ20 ಮಾದರಿ ಪಂದ್ಯಗಳಿಂದ ಧೋನಿ ಕೈಬಿಡಲು ಒತ್ತಾಯ ಹೆಚ್ಚುತ್ತಿದೆ. ನಾಯಕ ಕೊಹ್ಲಿ ಧೋನಿ ಬೆಂಬಲಕ್ಕೆ ಬಂದ ಬೆನ್ನಲ್ಲೇ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಆಕಾಶ್ ಚೋಪ್ರಾ ಧೋನಿಯನ್ನು ಕೈ ಬಿಡಲು ಸಲಹೆ ನೀಡಿದ್ದಾರೆ. ಮುಂಬರುವ ಶ್ರೀಲಂಕಾ ಸರಣಿಗೆ ಧೋನಿಯನ್ನು ಕೈಬಿಟ್ಟು ಯುವ ಆಟಗಾರನಿಗೆ ಅವಕಾಶ ನೀಡಬೇಕು ಎಂದು ಚೋಪ್ರಾ ಒತ್ತಾಯಿಸಿದ್ದಾರೆ. ಧೋನಿಗೆ ಟಿ20 ಪಂದ್ಯಗಳಿಂದ ಕೊಕ್ ನೀಡಬೇಕೆಂದು ಮಾಜಿ ಆಟಗಾರರಾದ ವಿವಿಎಸ್ ಲಕ್ಷ್ಮಣ್, ಅಜಿತ್ ಅಗರ್ಕರ್