ಮುಂಬೈ: ವಿಶ್ವಕಪ್ ವೇಳೆ ಟೀಂ ಇಂಡಿಯಾ ಆಯ್ಕೆ ಸಮಿತಿ ಸದಸ್ಯರು ಅನುಷ್ಕಾ ಶರ್ಮಾಗೆ ಚಹಾ ಕಪ್ ಸರಬರಾಜು ಮಾಡುತ್ತಿದ್ದರು ಎಂಬ ಮಾಜಿ ಕ್ರಿಕೆಟಿಗ ಫಾರುಖ್ ಇಂಜಿನಿಯರ್ ಆರೋಪಗಳಿಗೆ ಅನುಷ್ಕಾ ಪ್ರತಿಕ್ರಿಯಿಸಿದ್ದಾರೆ.ನಾನು ಪ್ರತೀ ಬಾರಿ ಭಾರತೀಯ ಕ್ರಿಕೆಟ್ ಗೆ ಸಂಬಂಧಿಸಿದ ಟೀಕೆಗಳಿಗೆ ಸುಮ್ಮನೇ ಬಲಿಪಶುವಾಗಿರುತ್ತೇನೆ. ನಾನು ಕೇವಲ ಒಬ್ಬ ಕ್ರಿಕೆಟಿಗನ ಪತ್ನಿಯಷ್ಟೇ. ಹಾಗಂತ ಪ್ರತೀ ವಿವಾದದಲ್ಲೂ ನನ್ನ ಹೆಸರು ಎಳೆದು ತರುವುದು ಸರಿಯಲ್ಲ. ನಾನು ಸಾಮಾನ್ಯವಾಗಿ ಟೀಕೆಗೆ ಉತ್ತರಿಸಲ್ಲ. ಆದರೆ ಮಿತಿ