ಮೊದಲ ಸರಣಿಯಲ್ಲೇ ಇಂಪ್ರೆಸ್ ಮಾಡಿದ ರಾಹುಲ್ ದ್ರಾವಿಡ್

ಕೊಲೊಂಬೋ| Krishnaveni K| Last Modified ಗುರುವಾರ, 22 ಜುಲೈ 2021 (08:50 IST)
ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವಿನ ಸರಣಿಯ ಮೂಲಕ ಮೊದಲ ಬಾರಿಗೆ ಟೀಂ ಇಂಡಿಯಾಗೆ ಪೂರ್ಣ ಪ್ರಮಾಣದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಮೊದಲ ಸರಣಿಯಲ್ಲೇ ಜನ ಮನ ಗೆದ್ದಿದ್ದಾರೆ.
 

ಎರಡನೇ ಪಂದ್ಯದಲ್ಲಿ ದ್ರಾವಿಡ್ ಕ್ರಿಕೆಟ್ ನ ತಮ್ಮ ಜಾಣತನವನ್ನೆಲ್ಲಾ ಧಾರೆಯೆರೆದು ಪಂದ್ಯ ಗೆಲ್ಲಿಸಿದ್ದರು. ಆಟಗಾರನಾಗಿ ತಂಡಕ್ಕೆ ಸದಾ ಆಪತ್ಬಾಂಧವನಾಗಿರುತ್ತಿದ್ದ ದ್ರಾವಿಡ್ ಒಬ್ಬ ಕೋಚ್ ಹೇಗಿರಬೇಕೆಂದು ಕಲಿಸಿಕೊಟ್ಟಿದ್ದರು.
 
ನಿರ್ಣಾಯಕ ಹಂತದಲ್ಲಿ ಡಗ್ ಔಟ್ ಗೆ ಬಂದು ರಾಹುಲ್ ಚಹರ್ ಬಳಿ ದೀಪಕ್ ಚಹರ್ ಗೆ ಸಂದೇಶ ನೀಡಲು ಹೇಳಿಕೊಟ್ಟಿದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಈ ಗೆಲುವಿನಲ್ಲಿ ಶಿಖರ್ ಧವನ್ ನಾಯಕತ್ವಕ್ಕಿಂತ ದ್ರಾವಿಡ್ ಕೋಚಿಂಗ್ ಶೈಲಿಯೇ ಎಲ್ಲೆಡೆ ಸದ್ದು ಮಾಡುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :