ಮುಂಬೈ: ಐಪಿಎಲ್ ನಲ್ಲಿ ಮುಂಬೈ ಆಟಗಾರರಾಗಿರುವ ಅರ್ಜುನ್ ತೆಂಡುಲ್ಕರ್ ಗೆ ಇದುವರೆಗೆ ಆಡುವ ಅವಕಾಶ ಸಿಕ್ಕಿಲ್ಲ. ಆದರೆ ಈಗ ಒಂದೇ ಒಂದು ಯಾರ್ಕರ್ ನಿಂದ ಸುದ್ದಿಯಾಗಿದ್ದಾರೆ.ಮುಂಬೈ ಆಟಗಾರರ ನೆಟ್ ಪ್ರಾಕ್ಟೀಸ್ ವೇಳೆ ಅರ್ಜುನ್ ತೆಂಡುಲ್ಕರ್ ಬೌಲಿಂಗ್ ಮಾಡಿದ್ದಾರೆ. ಈ ವೇಳೆ ಅವರು ಎಸೆದ ಕರಾರುವಾಕ್ ಯಾರ್ಕ್ ಎಸೆತವೊಂದು ಬ್ಯಾಟಿಗನನ್ನು ಬೌಲ್ಡ್ ಮಾಡಿದೆ.ಈ ಯಾರ್ಕರ್ ವಿಡಿಯೋ ವೀಕ್ಷಿಸಿದ ಮಂದಿ ಸದ್ಯದಲ್ಲೇ ಅರ್ಜುನ್ ಐಪಿಎಲ್ ಗೆ ಪದಾರ್ಪಣೆ ಮಾಡುವುದು ಖಚಿತ ಎಂದಿದ್ದಾರೆ. 20